ಜೇವನದ ಸಾಗರದಲ್ಲಿ
ಭರ ಸೆಳೆವ ತೆರೆಗಳಲ್ಲಿ
ಒಂಟಿ ದೋಣಿಯ ನೂಕುವಾಕೆ
ನಿನಗೆ ಬೇರೆ ಹೆಸರು ಬೇಕೆ?
ಅಶ್ವಿನಿ ಎಂದರೆ ಅಷ್ಟೇ ಸಾಕೆ
ಭರ ಸೆಳೆವ ತೆರೆಗಳಲ್ಲಿ
ಒಂಟಿ ದೋಣಿಯ ನೂಕುವಾಕೆ
ನಿನಗೆ ಬೇರೆ ಹೆಸರು ಬೇಕೆ?
ಅಶ್ವಿನಿ ಎಂದರೆ ಅಷ್ಟೇ ಸಾಕೆ
ಗಿಣಿಯ ತರಹ ಎಳವೆ ಕಳೆದೆ
ಕಡುಕಾಡಿನ ಹುಲಿಯ ಪಡೆದೆ
ಕೊನೆಗೂ ಅವನ ಜಯಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಅಶ್ವಿನಿ ಎಂದರೆ ಅಷ್ಟೇ ಸಾಕೆ
ಯಮಳ ತಳಮಳ ಗರ್ಭದಲ್ಲಿ
ಸಂತ್ರಿಪ್ತಿಯ ಹರದಾರಿಲ್ಲಿ
ದಿಟ್ಟ ಹೆಜ್ಜೆಯ ಮೆಟ್ಟಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಅಶ್ವಿನಿ ಎಂದರೆ ಅಷ್ಟೇ ಸಾಕೆ?
ಮನ ಮನಸಿನ ಕಲ್ಮಶವ ಗುಡಿಸಿ
ಹೊತ್ತು ಹೊತ್ತಿಗೆಅನ್ನವ ಬಡಿಸಿ
ಗಂಡಮಕ್ಕಳ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಅಶ್ವಿನಿ ಎಂದರೆ ಅಷ್ಟೇ ಸಾಕೆ?