Wednesday, September 29, 2010

The lady in red

That was one of those times where I had just changed my job. There wasn't much work load in the office, so I used to spend a lot of time in internet looking for some beautiful faces. I had just turned what I considered as the right age for marriage. So I used to look at matrimonial sites more than anything else. These matrimonial sites are as addictive as smoking. Once you are addicted, the only way to stop it is to get married! Whenever I get some time,  I open my favourite site for a quick look, not to miss any opportunities. It isn't that easy to find the right match on your own without any help from people who really know how to handle these.

After my continuous search, one fine day I saw an interesting profile. A beautiful lady in red dress! It was more than love at first sight. Even before I saw her (personally), I felt we have been together for a long time! Even before I heard her voice, I felt I have had hours of conversation with her. Even before I shared my feelings with her, I have decided we are meant to be together!

That was just for seconds, I came back to my normal state immediately and started thinking practically. I looked at my decision from a couple of angles trying to cover any hidden gaps. After that talked to my friends to make sure I haven't lost my mind completely. Once I got a satisfying reply, called up her parents directly without hesitating much. They didn't look that excited initially, guess they wanted to wait for some more time to find someone better. But they eventually realized the truth and accepted me as the right choice for her...

OK, some of you know this is not exactly how it happened. If you are confused, that is intentional. I am also as confused as you are! I started writing the real blog I intended and thought would tell it in a different way, like a 2-D blog similar to upendra movie. I am very happy that I got it right. I am as irritated as seeing that movie again now, but trying hard to convince myself that this is indeed a two dimensional story. But I also started admiring that movie, knowing how hard it is really to give a two dimensional story that makes sense. Between the other dimension is my recent experience of buying my first car. A lot of things are really true. The car is red, I saw it in a car trader site, liked it in the first look without any intention to wait for a better one! Its been a months since I started using it, and I am finding more similarities with the story [sadly I am not authorized to write about it;)]

Sunday, September 19, 2010

ನಾಮ-ಕಾರಣ

ಹತ್ತಿರ ಹತ್ತಿರ ಎಂಟು ವರ್ಷ ಆಯಿತು, ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಂಪ್ಯೂಟರ್ ಪ್ರೋಗ್ರಾಮ್ ಬರೆಯಲು ಶುರು ಮಾಡಿ. ಇವತ್ತಿಗೂ ಕೂಡ ಸ್ವಲ್ಪವೂ ಗೊತ್ತೇ ಆಗದ ಹಾಗೆ ಜಾಸ್ತಿ ಸಮಯ ತಗೊಳ್ಳುವ ಕೆಲಸ ಅಂದ್ರೆ variable naming, ಪ್ರೋಗ್ರಾಮ್ ಗಳಲ್ಲಿ ನಾವು ಬಳಸೋ ಕೆಲವು ಪದಗಳಿಗೆ ಅರ್ಥಪೂರ್ಣ ಹೆಸರು ಕೊಡೋದು. ಅರ್ಥಪೂರ್ಣ ಹೆಸರು ಕೊಟ್ರೆ ಬೇರೆಯವರಿಗೆ ಸುಲಭದಲ್ಲಿ ನಾವು ಬರೆದಿರುವುದು ಅರ್ಥವಾಗಬಹುದು ಅನ್ನೋದು ಉದ್ದೇಶ. ಬೇರೆಯವರಿಗೆ ಅರ್ಥವಾಗಬಾರದೆನ್ನೋ ದುರುದ್ದೇಶದಿಂದ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ಕೊಟ್ಟು ಕ್ಲಿಷ್ಟವಾಗಿಸುವವರೂ ಇರುತ್ತಾರೆ, ಇನ್ನು ಕೆಲವರಿಗೆ ಯಾವುದಕ್ಕೆ ಯಾವ ಹೆಸರು ಹೊಂದಿಕೆಯಾಗುತ್ತದೆ ಎನ್ನುವ ಕಲೆಯೇ ಕರಗತವಾಗಿರುವುದಿಲ್ಲ. ಅದು ತಿಳಿದವರಿಗೆ ಕೂಡ ಅಷ್ಟು ಸುಲಭವಾಗಿ ಮನಸ್ಸೊಪ್ಪುವ ಹೆಸರಿಡಲಾಗುವುದಿಲ್ಲ. ಎಷ್ಟೋ ಸಮಯ ತಗೊಂಡು ಒಮ್ಮೆ ಒಪ್ಪುವ ಹೆಸರಿಟ್ಟರು ಕೂಡ, ಇನ್ನೊಮ್ಮೆ ತಿರುಗಿ ನೋಡಿದರೆ ಸಮಾಧಾನವಿಲ್ಲ. ಇನ್ನು ಸ್ವಲ್ಪ ಚೆನ್ನಾಗಿರೋ ಹೆಸರಿಡಬಹುದಿತ್ತೆನ್ನುವ ಬಯಕೆ.

ನಮ್ಮ ಹಿಂದಿನವರಿಗೆ ಸಹ ಹೆಸರಿನ ಬಗ್ಗೆ ತುಂಬಾ ಅಭಿಮಾನ ಇತ್ತನಿಸುತ್ತೆ, ಮಕ್ಕಳಿಗೆ ಅರ್ಥಪೂರ್ಣ ಹೆಸರನ್ನೇ ಇಡುತ್ತಿದ್ದರು. ನಮ್ಮ ಮಾವ ಸ್ವಲ್ಪ ಕಪ್ಪಗಿದ್ದರು ಅಂತ ಅವ್ರಿಗೆ ಕರಿಯ ಅಂತ ಹೆಸರಿಟ್ಟಿದ್ದರು. ಇನ್ನೊಬ್ಬರು ಶನಿವಾರ ಹುಟ್ಟಿದ್ದರು ಅಂತ ಶನಿಯ ಅಂತ ಹೆಸರಿಟ್ಟಿದ್ದರು. ಒಬ್ಬರು ಹುಟ್ಟುವಾಗಲೇ ಜೋರಾಗಿದ್ದರು ಅಂತ ಕಾಳಿ ಅಂತ ಹೆಸರು. ಮಹಾಭಾರತ ರಾಮಾಯಣ ಕಥೆಗಳನ್ನೂ ನೋಡಿದರೂ ಕೂಡ ಪ್ರತಿಯೊಬ್ಬರ ಹೆಸರಲ್ಲೂ ಅವರ ಗುಣಗಳನ್ನು ಕಾಣಬಹುದು. ಹುಟ್ಟುವಾಗ ಕುದುರೆ ಹಾಗೆ ಕೆನೆದ ಅಂತ ದ್ರೋಣ ಮಗನಿಗೆ ಅಶ್ವತ್ಥಾಮ ಅಂತಾನೆ ಹೆಸರಿಟ್ಟ. ಘನ ಗಾತ್ರದ ದೇಹ ಅಂತ ಕುಂತಿ ಮಗನಿಗೆ ಭೀಮ ಅಂತ ಹೆಸರಿಟ್ಟಳು. ಕಪ್ಪಗಿದೆ ಮಗು ಅಂತ ವಸುದೇವ ಮಗನಿಗೆ ಕೃಷ್ಣ ಅಂತ ಹೆಸರಿಟ್ಟ. ಪುಣ್ಯ ಕರ್ನಾಟಕದಲ್ಲಿ ಹುಟ್ಟಲಿಲ್ಲ, ಇಲ್ಲದಿದ್ರೆ ಕೃಷ್ಣನ ಬದಲು ಕರಿಯ ಅಂತ ಇಡುತ್ತಿದ್ದರೇನೋ.

ಈ ಕಾಲದಲ್ಲಿ ಮಕ್ಕಳಿಗೆ ಯಾರೂ ಹಾಗೆ ಅರ್ಥಪೂರ್ಣವಾಗಿ ಹೆಸರಿಡುವುದು ಕಾಣುವುದಿಲ್ಲ. ಒಂದು ರೀತಿ ನೋಡಿದರೆ ಅದನ್ನು ತಪ್ಪೆನ್ನೆಲ್ಲು ಆಗುವುದಿಲ್ಲ. ಯಾವ ವಸ್ತುವನ್ನಾದರೂ ಹೆಸರಿಸುವಾಗ ಅದರ ಗುಣಕ್ಕೆ ಹೊಂದಿಕೆಯಾಗಿರುವ ಹಾಗಿರಬೇಕು. ಒಂದೆರಡು ತಿಂಗಳ ಮಕ್ಕಳ ಗುಣ ಮುಂದೆ ಹೇಗಾಗುತ್ತೆ ಅಂತ ಯಾರಿಗೆ ತಾನೆ ಗೊತ್ತಿರತ್ತೆ, ನಾವೇನು ದಿವ್ಯ ದ್ರಿಷ್ಟಿ ಇರುವವರಲ್ಲ, ಹಾಗಾಗಿ ನಮಗೆ ಯಾವುದು ಇಷ್ಟವಾಗುತ್ತೋ ಅದನ್ನೇ ಇಡುತ್ತೇವೆ. ಅದಕ್ಕೆ ಮಗು ಹುಟ್ಟೋ ಒಂದು ವರ್ಷದ ಮುಂಚೆನೇ ಹೆಸರು ಹುಡುಕಲು ಆರಂಭ ಕೂಡಾ ಮಾಡುತ್ತೇವೆ. ಅಷ್ಟು ಬೇಗ ಶುರು ಮಾಡಿದರು ಕೂಡ ಮಗು ಹುಟ್ಟುವ ತನಕ ಎಲ್ಲರಿಗು ಇಷ್ಟವಾಗೋ ಹೆಸರು ಸಿಕ್ಕಿರುವುದಿಲ್ಲ. ಕೆಲವರಿಗಂತೂ  ಮಕ್ಕಳಿಗೆ ಹೆಸರಿಡುವುದೇ ಹೆರುವುದಕ್ಕಿಂತ ಕಷ್ಟದ ಕೆಲಸ ಅನ್ನಿಸುವುದಂತೆ. ನಾನೇನು ಮಕ್ಕಳಿಗೆ ಹೆಸರಿಡೋ ಪ್ರಯತ್ನಕ್ಕೆ ಕೈ ಹಾಕಿಲ್ಲ, ನಾನು ಕಷ್ಟ ಪಡ್ತಾ ಇರೋದು ನನ್ನ ಬ್ಲಾಗಿಗೆ ಒಂದು ಒಳ್ಳೆ ಹೆಸರಿಡಲು. ಇದಕ್ಕೆ ನಾನು ಇಷ್ಟು ಒದ್ದಾಡ್ತಾ ಇದ್ದೆನೆಂದ್ರೆ ಇನ್ನು ಮಕ್ಕಳಿಗೆ ಹೆಸರು ಇಡೋವರ ಕಷ್ಟ ಎಷ್ಟೆಂದು ನನಗೆ ಅರ್ಥವಾಗ್ತಾ ಇದೆ. ಹೆಸರಿಡೋ ಕಷ್ಟ ಎರಡಕ್ಕೂ ಒಂದೇ. ಒಂದು ಭಿನ್ನ ವಿಚಾರ ಅಂದ್ರೆ ನನ್ನ ಬ್ಲಾಗಿನ ಹೆಸರನ್ನು ನಾನು ಯಾವತ್ತಾದರೂ ಬದಲಾಯಿಸಬಹುದು, ಆದರೆ ಮಕ್ಕಳ ಹೆಸರು ಹಾಗೆ ಸುಲಭದಲ್ಲಿ ಬದಲಾಯಿಸಲಾಗುವುದಿಲ್ಲ. ಆದರೆ ಮಕ್ಕಳಿಗೆ ಯಾವ ಹೆಸರಾದರೂ ಇಡಬಹುದು, ಆದರೆ ಬ್ಲಾಗಿನ ಹೆಸರು ಅದರ ಬರಹಗಳಿಗೆ ಹೊಂದುವ ಹಾಗಿರಬೇಕು.

ಹುಟ್ಟಿದಾಗ ನನಗೆ ಉಮೇಶ ಅಂತ ಹೆಸರಿಟ್ಟಿದ್ದರಂತೆ, ಅದು ಯಾರಿಗೋ ಇಷ್ಟವಾಗದೆ ಸತೀಶ ಅಂತ ಬದಲಾಯಿಸಿದರು. ನನಗೆ ಐದನೇ ತರಗತಿಯ ತನಕ ಅವರ ಮೇಲೆ ತುಂಬಾ ಕೋಪವಿತ್ತು, ಅಲ್ಲಿ ತನಕ ನನ್ನ ಹೆಸರಿನ ಅರ್ಥವೇ ನನಗೆ ಗೊತ್ತಿರಲಿಲ್ಲ. ಸವರ್ಣ ದೀರ್ಘ ಸಂಧಿಯ ಪ್ರಕಾರ  ಸತಿ + ಈಶ = ಸತೀಶ. ಸತಿ ಅಂದರೆ ಹೆಂಡತಿ ಈಶ ಅಂದರೆ ಒಡೆಯ/ಗಂಡ ಅಂತ ಮಾತ್ರ ಗೊತ್ತಿತ್ತು, ಹಾಗಾಗಿ ಎಲ್ಲರು ನನ್ನನ್ನು ಹೆಂಡತಿಯ ಗಂಡ ಅಂತ ಗೇಲಿ ಮಾಡ್ತಾ ಇದ್ದರು. ಅದಕ್ಕಿಂತ ಉಮಾಳ ಗಂಡನೇ ಸ್ವಲ್ಪ ಚೆನ್ನಾಗಿತ್ತು ಅನ್ನಿಸಿತ್ತು. ತರಗತಿಯಲ್ಲಿ ಇರುವ ಇಬ್ಬರು ಮೂವರು ಉಮಾರಲ್ಲಿ ಒಬ್ಬರಾದರು ಸ್ವಲ್ಪ ಚೆನ್ನಾಗಿರುತ್ತಿದ್ದರು. ಆಮೇಲೆ ನನಗೆ ಗೊತ್ತಾಯಿತು ಸತಿ ಅಂದರೆ ಪಾರ್ವತಿಯ ಇನ್ನೊಂದು ಹೆಸರೆಂದು. ಆವಾಗ ಮನಸ್ಸಲ್ಲೇ ನನ್ನ ಹೆಸರು ಬದಲಾಯಿಸಿದವರಿಗೆ ಒಂದು ಥ್ಯಾಂಕ್ಸ್ ಹೇಳಿದ್ದೆ, ನನ್ನ ಅವಕಾಶವನ್ನು ದೊಡ್ಡದು ಮಾಡಿದ್ದಕ್ಕೆ. ಉಮಾಳ  ಜೊತೆ ಗೌರಿ, ಲಲಿತ, ಅಪರ್ಣಾರನ್ನೂ ಸೇರಿಸಬಹುದೆಂದು(ಸತಿಗೆ ೧೦೮ ಹೆಸರುಗಳಂತೆ), ಅವರು ಚೆನ್ನಾಗಿದ್ದರೆ!

ಹತ್ತನೇ ತರಗತಿಯ ತನಕ ಶಾಲೆಯಲ್ಲಿ 'ಸತೀಶ ಪೂಜಾರಿ' ಅಂತ ಹೆಸರನ್ನು ಬರೆಸಿದ್ದರು ಮನೆಯವರು, ಹೆಸರಿನ ಜೊತೆಗೆ ಜಾತಿಯ ಹೆಸರೂ ಇರಲಿ ಅಂತ. ಆದರೆ ನನಗೆ ಜಾತಿಯ ಹೆಸರು ಹಾಕಿದ್ದು ಅಷ್ಟು ಇಷ್ಟ ಇರಲಿಲ್ಲ, ಯಾಕಂದ್ರೆ ಚೆನ್ನಾಗಿರೋ ಹುಡುಗಿಯರೆಲ್ಲ ಬೇರೆ ಜಾತಿಯವರೇ ಆಗಿದ್ದರು. ಪುಣ್ಯಕ್ಕೆ ಹತ್ತನೇ ತರಗತಿಯಲ್ಲಿ ಹೆಸರು ಬದಲಾಯಿಸೋ ಅವಕಾಶವಿತ್ತು, ಹಿಂದಿನ ತರಗತಿಯ ಮಾರ್ಕ್ಸ್ ಕಾರ್ಡ್ ಗಳು ಅಷ್ಟು ಮುಖ್ಯವಲ್ಲದ್ದರಿಂದ. ಮನೆಯಲ್ಲಿ ಹೇಳಿದೆ ಜಾತಿ ಹೆಸರು ಹಾಕಿದರೆ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ತಿದ್ದುವವರು ಜಾತಿ ನೋಡಿ ಮಾರ್ಕ್ಸ್ ಕಡಿಮೆ ಮಾಡುತ್ತಾರೆ, ಅದಕ್ಕೆ ಜಾತಿ ಹೆಸರು ತೆಗೆಯುವ ಅಂತ. ಮಾರ್ಕ್ಸ್ ಕಡಿಮೆ ಆಗುತ್ತಂದ ಕೂಡಲೇ ಮನೆಯವರು ಹೂಂ ಅಂದರು.

ಹಾಗಾಗಿ ಹತ್ತನೆ ತರಗತಿಯಲ್ಲಿ ನಾನು ಜಾತಿಯಿಂದ ಹೊರ ಬಂದೆ. ಆದರೆ ಹೆಸರನ್ನು ಇಂಗ್ಲಿಷಲ್ಲಿ ಬರೆಯುವಾಗ ಮೇಷ್ಟ್ರು ನೇರವಾಗಿ ಕನ್ನಡದಿಂದ ಬದಲಾಯಿಸಿ ಒಂದು ಜಾಸ್ತಿ 'a' ಸೇರಿಸಿದರು. ಹಾಗಾಗಿ 'sathisha' ಆಯಿತು ನನ್ನ ಹೆಸರು. ಮೊದ ಮೊದಲು ತುಂಬಾ ಕಿರಿ ಅನ್ನಿಸ್ತ ಇತ್ತು, ಸ್ವಲ್ಪ ಹುಡುಗಿಯರ ಹೆಸರಿನ ತರ ಇದೆ ಅಂದು. ಆದರೆ ಮುಂದೆ ಮುಂದೆ ಪರವಾಗಿಲ್ಲ ಸ್ವಲ್ಪ ಬೇರೆ ತರ ಇದೆ ಅಂತ ಅನ್ನಿಸತೊಡಗಿತು. ಮೊನ್ನೆ ಮೊನ್ನೆ ಇಲ್ಲಿಯ ಸ್ನೇಹಿತರೊಬ್ಬರಿಗೆ ಹಿಂದೂ ಹೆಸರಲ್ಲಿ ಲಿಂಗ ಬದಲಾವಣೆ ಹೇಗೆ ಗುರುತಿಸುವುದು ಅಂತ ಹೇಳುತ್ತಾ ಇದ್ದೆ. ಸಾಮಾನ್ಯವಾಗಿ ಹೆಸರಿನ ಕೊನೆಗೆ vowels ಇದ್ದರೆ, ಅಂದರೆ 'a e i o u' ಕೊನೆಯಲ್ಲಿ ಬಂದರೆ ಅದು ಹುಡುಗಿಯರ ಹೆಸರಾಗಿರುತ್ತೆ. ಕೂಡಲೇ ನೆನಪಾಯಿತು ನನ್ನ ಹೆಸರಿನ ಕೊನೆಗೂ ‘a‘ ಇದೆ ಅಂತ, ಹಾಗಾಗಿ ಕೂಡಲೇ ಹೇಳಿದೆ 'except sathisha' ಅಂತ. ಹಿಂದೆ HP ಯಲ್ಲಿ ಕೆಲಸ ಮಾಡುವಾಗ, ಯಾವನೋ ಒಬ್ಬ jabber messenger ಲ್ಲಿ ನನ್ನ  ಹೆಸರು ನೋಡಿ, ನಾನು ಹುಡುಗಿ ಅಂತ ತಿಳಿದು flirt ಮಾಡಲು ಶುರು ಮಾಡಿದ್ದ. ನನ್ನ ಹೆಸರಿನ ಮೇಲೆ ಸರಿತಾ ಅಂತ ಇನ್ನೊಬ್ಬಳಿದ್ದಳು, ಅವಳು ಅವನ ಪರಿಚಯದವಳಂತೆ. ಹಾಗಾಗಿ ನಾನೂ ಅವಳ ಹಾಗೆ ಅಂದು ಕೊಂಡು ಎರಡು ವಾರ ಮಾತಾಡಿದ, ಮತ್ತೆ ಭೇಟಿಯಾಗು ಭೇಟಿಯಾಗು ಅಂತ ಒತ್ತಾಯಿಸತೊಡಗಿದ, ಹೇಗೋ ತಪ್ಪಿಸಿಕೊಂಡೆ, ಸ್ವಲ್ಪ ದಿನದಲ್ಲಿ ಬೇರೆ ಕಂಪನಿ ಸೇರಿಕೊಂಡದ್ದರಿಂದ ಬದುಕಿಕೊಂಡೆ.

ಕೆಲಸಕ್ಕೆ ಸೇರಿಕೊಂಡ ಮೇಲೆ ಜಾತಿಯಿಂದ ಹೊರ ಬಂದಿದ್ದು ತಪ್ಪು ಅನ್ನಿಸತೊಡಗಿತು, ಯಾವ  form ಸಹ ಜಾತಿಯನ್ನು(surname) ಹೆಸರಿಸದೆ  ಮುಂದೆ ಹೋಗಲೇ ಬಿಡುತ್ತಿರಲಿಲ್ಲ, ಅದಕ್ಕಾಗಿ ಮತ್ತೆ ಸತೀಶ ಪೂಜಾರಿ ಆದೆ. ಇದು ವೀಸಾಕ್ಕೆ ತೊಂದರೆಯಾಗ ಬಹುದು ಅನ್ನಿಸಿ ಮತ್ತೆ ಒಂದು ಸಾವಿರ ಕರ್ಚು ಮಾಡಿ officially ಹೆಸರಿಗೆ ಜಾತಿಯನ್ನು ಹಾಕಿದೆ, ಎರಡು ವೃತ್ತ ಪತ್ರಿಕೆಗಳಲ್ಲೂ ಹಾಕಿದೆ ಎಲ್ಲರಿಗೂ ತಿಳಿಯಲಿ ಅಂತ. ಆವಾಗ ಅನಗತ್ಯ 'a' ತೆಗೆಯೋ ಅವಕಾಶವಿದ್ದರೂ ಕೂಡ ಇರಲಿ ಅಂತ ಹಾಗೆಯೇ ಬಿಟ್ಟೆ.

ವಾಪಾಸು ನನ್ನ ಬ್ಲಾಗಿನ ನಾಮಕರಣಕ್ಕೆ ಬರೋಣ. ಎಲ್ಲರ ತರ ಹೆಸರು ಭಿನ್ನವಾಗಿರಬೇಕೆಂಬುದು ನನ್ನ ಮೊದಲ ಅಗತ್ಯವಾಗಿತ್ತು. ಹಾಗಾಗಿ ಒಮ್ಮೆ ಎಲ್ಲ ಬ್ಲಾಗುಗಳನ್ನು ನೋಡಿದೆ, ನನ್ನ ಇಷ್ಟದ ಹೆಸರುಗಳೆಲ್ಲವೂ ಅವಾಗಲೇ ಬೇರೆ ಬೇರೆ ಬ್ಲಾಗುಗಳಲ್ಲಿ ಅನಾವರಣವಗಿದ್ದವು. ಹಾಗಾಗಿ ನನಗಿಷ್ಟವಾದ ಬೇರೆಯವರು ಇಡದ ಹೆಸರು ಹುಡುಕೋದೇ ದೊಡ್ಡ ಕಷ್ಟವಾಯಿತು, ಕೊನೆಗೆ ಅರ್ಧ ಮನಸ್ಸಿಂದ 'ಅಪರಿಚಿತ' ಅಂತ ನಾಮಕರಣ ಮಾಡಿದೆ. ಆದರೆ ಆ ಹೆಸರೂ ಕೂಡ ಇಲ್ಲಿ ತನಕ ನನಗೆ ಅಪರಿಚಿತವಾಗೆ ಉಳಿಯಿತು. ಕೆಲವೊಮ್ಮೆ ಪರವಾಗಿಲ್ಲ ಅನ್ನಿಸಿದರೂ ಯಾಕೋ ಸ್ವಲ್ಪ ಜಾಸ್ತಿಯೇ ಸೀರಿಯಸ್ ಆಯಿತು ಅನ್ನಿಸಿತು. ಹಾಗಾಗಿ ಈವಾಗ ಮತ್ತೆ ಹೆಸರು ಬದಲಾಯಿಸುವ ಮನಸ್ಸು ಮಾಡಿದೆ.

ನನ್ನ ಮೊದಲಿನ ಬರಹಗಳನ್ನೊಮ್ಮೆ ನೋಡಿದೆ, ಮುಂದೆ ಬರೆಯಬೇಕನ್ನಿಸಿದ್ದನ್ನು ಒಮ್ಮೆ ಆಲೋಚಿಸಿದೆ. ನನ್ನ ಬಹುತೇಕ ಬರಹಗಳು ಮುಚ್ಚುಮರೆಯಿಲ್ಲದೆ ನಾನು ಹೇಗೆ ಆಲೋಚಿಸುತ್ತೇನೆ ಅನ್ನುವುದನ್ನು ಬೇರೆಯವರಿಗೆ ಹೇಳುವ ಪ್ರಯತ್ನ ಅನ್ನಿಸಿತು, ಅದಕ್ಕೆ ಕೊನೆಯಲ್ಲಿ 'ಬಿಚ್ಚು ಮಾತು' ಅನ್ನೋ ಹೆಸರಿಡಲು ತೀರ್ಮಾನಿಸಿದೆ. ಕೂಡಲೇ ‘ಬಿಚ್ಚು ಮಾತಿನ‘ ಇನ್ನೊಂದು ಮುಖವೂ ನೆನಪಿಗೆ ಬಂತು. ಇಂಜಿನೀರಿಂಗ್ ಮೊದಲ ವರ್ಷದಲ್ಲಿ ಸೀನಿಯರ್ಸ್ ರಾಗಿಂಗ್ ಮಾಡಲು ಒಮ್ಮೆ ರಾತ್ರಿ ಸಮಯದಲ್ಲಿ ಕಾಲೇಜು ಮೈದಾನಕ್ಕೆ ಕರೆದಿದ್ದರು. ಆವಾಗಿನ್ನೂ ನಾನು ಲುಂಗಿ ಉಡುತ್ತಿದ್ದೆ, ನನ್ನ ಜೊತೆ ನಮ್ಮೂರಿನ ವಿಜಯ ಸಹ ಇದ್ದ ಲುಂಗಿ ಹಾಕಿಕೊಂಡು. ನಮ್ಮನ್ನು ಲುಂಗಿಯಲ್ಲಿ ನೋಡಿದ ಸೀನಿಯರ್ಸಿಗೆ ಸ್ವಲ್ಪ ಆಶ್ಚರ್ಯ ಆಯಿತಿರಬೇಕು, ಹಾಗೆ ಕುಶಿಯು ಆಯಿತು, ಚೆನ್ನಾಗಿ ಆಟ ಆಡಿಸಬಹುದೆಂದು. ಕೂಡಲೇ ಒಬ್ಬ ಲುಂಗಿ ಬಿಚ್ಚಿ ಅಂತ ಹೇಳಿದ, ನಮಗೇನು ದೊಡ್ಡ ವಿಷಯ ಅನ್ನಿಸಲಿಲ್ಲ, ಬಿಚ್ಚಿ ಅನ್ನುವ ಮಾತು ಮುಗಿಸೋ ಮೊದಲೇ ಲುಂಗಿ ಬಿಚ್ಚಿ ನಿಂತೆವು! ಅವರಿಗೂ ಮತ್ತೇನು ಹೇಳುವುದೆಂದು ತೋಚಲಿಲ್ಲ, ಅಲ್ಲಿಂದ ಕಾಲೇಜಿನಲ್ಲಿ ನನಗೆ 'ಬಿಚ್ಚು' ಅಂತ ಹೊಸ ನಾಮಕರಣ ಮಾಡಿದರು. ಸೀನಿಯರ್ಸ್ ಬೇರೆಯವರಿಗೆ ಇಟ್ಟ ಕೆಲವು ಹೆಸರುಗಳಿಗಿಂತ ಇದೆ ಪರವಾಗಿಲ್ಲ ಅನ್ನಿಸಿತ್ತು. ಹಾಗಾಗಿ ‘ಬಿಚ್ಚು ಮಾತೇ‘ ನನ್ನ ಬ್ಲಾಗಿಗೆ ಸರಿಯಾದ ಹೆಸರೆನಿಸಿತು. ಮುಚ್ಚು ಮರೆಯಿಲ್ಲದೆ ಮನಸಿನಲ್ಲಿದ್ದದ್ದನೆಲ್ಲ ಹೊರ ಹಾಕಿದ ಬರಹಗಳು ‘ಬಿಚ್ಚು ಮಾತುಗಳು‘, ಉಳಿದವು ‘ಬಿಚ್ಚುವಿನ ಮಾತುಗಳು‘. ಅವೆರಡೂ ಅಲ್ಲವೆಂದರೆ ಹೇಗಿದ್ದರೂ ಇದೆಯಲ್ಲ, ಮತ್ತೆ ಬದಲಾಯಿಸೋದು.