ಕರಿಯ ಬ್ರಹ್ಮ ದೇವರಿಗಾಗಿ ಘೋರ ತಪಸ್ಸು ಮಾಡಿದ, ಐದು ವರ್ಷಗಳ ತನಕ
ಕರಿಯನ ಸ್ವರ ಕೇಳಿ ಕೇಳಿ ಬೋರಾಗಿ, ರಗಳೆ ಹೋಗಲಿ ಅಂತ ಪ್ರತ್ಯಕ್ಷವಾದ ಬ್ರಹ್ಮದೇವ
'ಕರಿಯನೆ, ನಿನ್ನ ತಪ್ಪಸ್ಸಿಗೆ ಮೆಚ್ಚಿ ಬಂದಿದ್ದೇನೆ, ಬೇಕಾದ ವರ ಕೇಳು' ಅಂದ, ಸುಳ್ಳು ಸುಳ್ಳೇ
'ದೇವ, ಐದು ವರ್ಷ ಕಷ್ಟ ಪಟ್ಟಿದ್ದೇನೆ, ಕಡಿಮೆಯೆಂದರೆ ಐದಾದರೂ ವರ ಕೊಡು' ಚೌಕಾಶಿ ಶುರು ಮಾಡಿದ ಕರಿಯ
'ಒಂದು ದರ್ಶನಕ್ಕೆ, ಒಂದೇ ವರ, ಜಾಸ್ತಿ ಕೊಟ್ಟರೆ, ಶಕ್ತಿ ಕಡಿಮೆಯಾಗುತ್ತೆ, ಸರಸ್ವತಿ ಬಯ್ತಾಳೆ', ಬ್ರಹ್ಮ ಜೋರು ಮಾಡಿದ
'ಹಂಗಾದ್ರೆ ಒಂದು ನಿಮಿಷ ಕೊಡು', ಕರಿಯ ಸ್ವಲ್ಪ ಯೋಚಿಸ ತೊಡಗಿದ, ಏನು ಕೇಳೋದೆಂದು
ಬ್ರಹ್ಮ ತುಂಬಾ ಖುಷಿಯಾದ, 'ತಥಾಸ್ತು' ಅಂತ ಜಾಗ ಕಾಲಿ ಮಾಡಿದ...
ತಲೆಕೆಟ್ಟು, ಬುದ್ದಿಕಲಿಸ್ತೇನೆ ಬ್ರಹ್ಮನಿಗೆ ಅಂತ ಮತ್ತೆ ತಪಸ್ಸು ಶುರುಮಾಡಿದ ಕರಿಯ, ಈಶ್ವರನಿಗಾಗಿ
ಐದು ವರ್ಷದಿಂದ ಕರಿಯನ ಸ್ವರ ಕೇಳುತ್ತಿದ್ದ ಈಶ್ವರ ಕೂಡ ಬೋರಾಗಿ ಪ್ರ್ಯತ್ಯಕ್ಷವಾದ, ಮೂರು ವರ್ಷಕ್ಕೆ
'ಕರಿಯ, ನಿನ್ನ ತಪ್ಪಸ್ಸಿಗೆ ಮೆಚ್ಚಿ ಬಂದಿದ್ದೇನೆ, ಬೇಕಾದ ವರ ಕೇಳು', ಅವನೂ ಸುಳ್ಳು ಹೇಳಿದ
'ಪರಮೇಶ್ವರ ನೀನು ಹೋದ ಕೂಡಲೇ ಬ್ರಹ್ಮದೇವ ಪ್ರತ್ಯಕ್ಷವಾಗಿ ಮೂರು ವರ ಕೊಡುವಂತೆ ಮಾಡು' ಬೇಡಿದ ಕರಿಯ
ಮಜಾ ಮಾಡು ಬ್ರಹ್ಮ ಅಂದು, 'ತಥಾಸ್ತು' ಹೇಳಿದ ಈಶ್ವರ, ಮಾಯವಾದ
ಕರಿಯ ಕಣ್ಣು ತೆಗೆಯುವುದರಲ್ಲಿ ಪ್ರತ್ಯಕ್ಷ ಬ್ರಹ್ಮ, 'ಕೇಳು ಬಡ್ಡಿ ಮಗನೆ, ಬೇಗ ಮೂರು ವರ' ಸಿಟ್ಟಲ್ಲಿದ್ದ ಬ್ರಹ್ಮ
'೧. ನನ್ನ ಮ್ಯಾನೇಜರ್ ಕೆಲಸ ಹೋಗುವಂತೆ ಮಾಡು'
'ತಥಾಸ್ತು'
'೨. ಮ್ಯಾನೇಜರ್ ಅಕೌಂಟಲ್ಲಿ ಇರುವ ಹಣ ಎಲ್ಲ ನನ್ನ ಅಕೌಂಟ್ ಗೆ ಟ್ರಾನ್ಸ್ ಪರ್ ಮಾಡು'
'ತಥಾಸ್ತು' , ಸ್ವಲ್ಪ ಖುಷಿಯಾದ ಬ್ರಹ್ಮ, ಜಾಸ್ತಿ ತಲೆ ಇಲ್ಲ ಮಗಂಗೆ ಅಂತ
'೩. ಒಂದು ವರ್ಷವಾದ ಮೇಲೆ ಸಿಕ್ಕಿ ಮತ್ತೆ ಮೂರು ವರ ಕೊಡು' ಕೂಲಾಗಿ ಕೇಳಿದ ಕರಿಯ..
ಬ್ರಹ್ಮ ಪರ ಪರ ತಲೆ ಕೆರೆದು ಕೊಂಡ...